ಡಾ: ಬಾಬು ಜಗಜೀವನ ರಾಂ ಚರ್ಮ ಕೈಗಾರಿಕಾ ಅಭಿವೃದ್ದಿ ನಿಗಮ ನಿಯಮಿತ –  ಈ  ಮೊದಲು  ಕರ್ನಾಟಕ ಚರ್ಮ ಕೈಗಾರಿಕಾ ಅಭಿವೃದ್ದಿ ನಿಗಮ ನಿಯಮಿತ ಎಂದು ಕರೆಯಲ್ಪಡುತ್ತಿತ್ತು.  ಈ ನಿಗಮವನ್ನು  ಕರ್ನಾಟಕ ರಾಜ್ಯದಲ್ಲಿನ ಚರ್ಮೋದ್ಯಮದ ಬೆಳವಣಿಗೆ ಮತ್ತು ಅನುಸೂಚಿತ ಜಾತಿಯ ಚರ್ಮ ಕುಶಲಕರ್ಮಿಗಳ ಶ್ರೇಯೋಭಿವೃದ್ದಿ ಈ ಮೂಲ ಉದ್ದೇಶಗಳೊಂದಿಗೆ ಸರ್ಕಾರವು  1976 ರಲ್ಲಿ ಸ್ಥಾಪಿಸಿರುತ್ತದೆ.

ನಿಗಮವು ಸಮಾಜ ಕಲ್ಯಾಣ ಇಲಾಖೆಯ ಆಡಳಿತ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ.  ರಾಜ್ಯ ಸರ್ಕಾರವು ಪ್ರತಿ ವರ್ಷವು ಸಮಾಜ ಕಲ್ಯಾಣ ಇಲಾಖೆಯ ಆಯವ್ಯಯದಲ್ಲಿ ಅನುದಾನವನ್ನು ಒದಗಿಸುತ್ತಿದೆ..  ನಿಗಮವು ಚರ್ಮ ಕುಶಲಕರ್ಮಿಗಳ ಆರ್ಥಿಕ ಮತ್ತು ಸಾಮಾಜಿಕ ಅಭ್ಯುದಯವನ್ನು  ಗಮನದಲ್ಲಿಟ್ಟುಕೊಂಡು  ಹಲವು ಯೋಜನೆಗಳನ್ನು ಹಮ್ಮಿಕೊಂಡು ಅನುಷ್ಠಾನಗೊಳಿಸುತ್ತಾ ಬಂದಿರುತ್ತದೆ.